”ದೋಸ್ತಿ ಬೇರೆ… ಐಪಿಎಲ್ ಕ್ರೇಜ್ ಬೇರೆ!”
”ನಿನ್ನೆವರೆಗೂ ‘ಟೀಮ್ ಇಂಡಿಯಾ’ ಅಂದುಕೊಂಡು ನೀಲಿ ಜರ್ಸಿ ಹಾಕಿ, ಭುಜದ ಮೇಲೆ ಕೈ ಹಾಕಿ ಕುಣಿದಾಡಿದ್ದ ಬೆಸ್ಟ್ ಫ್ರೆಂಡ್ಸ್ ಇವತ್ತು ವೈರಿಗಳಾಗಿದ್ದಾರೆ! ಟಿ20 ವರ್ಲ್ಡ್ ಕಪ್ ಗೆದ್ದಾಗ ಒಟ್ಟಿಗೆ ಸಂಭ್ರಮಿಸಿದ ಅದೇ ಗೆಳೆಯರು, ಈಗ ಐಪಿಎಲ್ ಸೀಸನ್ ಬರ್ತಾ ಇದ್ದಂತೆ ‘ಜನ್ಮ ವೈರಿಗಳಂತೆ’ ಕಿತ್ತಾಡೋಕೆ ರೆಡಿಯಾಗಿದ್ದಾರೆ.
ಒಬ್ಬ RCB ಜರ್ಸಿ ಹಾಕಿದ್ರೆ, ಇನ್ನೊಬ್ಬ CSK ಸಪೋರ್ಟರ್. ಮೈದಾನದಲ್ಲಿ ಒಂದೇ ಒಂದು ವಿಕೆಟ್ ಬಿದ್ರೆ ಸಾಕು, ಅಲ್ಲಿಯವರೆಗೂ ಇದ್ದ ಆ ‘ಇಂಡಿಯಾ’ ಅನ್ನೋ ಒಗ್ಗಟ್ಟು ಸೈಡಿಗಿಟ್ಟು ಟ್ರೋಲಿಂಗ್ ಯುದ್ಧವೇ ಶುರುವಾಗುತ್ತೆ. ‘ನಿಮ್ಮ ತಂಡಕ್ಕೆ ಈ ಸಲಾನೂ ಕಪ್ ಇಲ್ಲ’ ಅನ್ನೋ ಆ ಒಂದು ಚುಚ್ಚು ಮಾತು, ಆತ್ಮೀಯ ಗೆಳೆಯರ ನಡುವೆ ಸಣ್ಣ ಮಟ್ಟದ ಬೆಂಕಿ ಹಚ್ಚುತ್ತೆ.
ನೆನಪಿಡಿ, ಇದು ದ್ವೇಷವಲ್ಲ, ಇದು ಐಪಿಎಲ್ ಅನ್ನೋ ಎಮೋಷನ್! ನಿನ್ನೆ ದೇಶಕ್ಕಾಗಿ ಒಂದಾಗಿದ್ದವರು, ಇವತ್ತು ತಮ್ಮ ಫೇವರಿಟ್ ಫ್ರಾಂಚೈಸಿಗಾಗಿ ಗುದ್ದಾಡೋದು ಈ ಹಬ್ಬದ ಅಸಲಿ ಮಜಾ!”
- “ನಿಮ್ಮ ಫ್ರೆಂಡ್ಸ್ ಗ್ರೂಪ್‌ನಲ್ಲೂ ಇಂತಹ ‘ವೈರಿ’ ಗೆಳೆಯ ಇದ್ದಾರಾ? ಅವರ ಹೆಸರನ್ನು ಕಾಮೆಂಟ್ ಮಾಡಿ!”
- ಐಪಿಎಲ್ 2026 ಕನ್ನಡ ವಿಶ್ಲೇಷಣೆ ಅನುಸರಿಸಿ
- Crickannada.in ನಲ್ಲಿ